ದಾವಣಗೆರೆ ಜಿಲ್ಲೆಯಲ್ಲಿ ಕೊರೊನದಿಂದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಕಾಲರ್ ಶಿಪ್


ವಿದ್ಯಾರ್ಥಿಯ ತಂದೆ ಮತ್ತು ತಾಯಿ ಇಬ್ಬರು ಕೊರೊನ (ಕೋವಿಡ್-೧೯) ದಿಂದ ಮೃತಪಟ್ಟಲ್ಲಿ ಆ ವಿದ್ಯಾರ್ಥಿಯನ್ನು ವಿದ್ಯಾರ್ಥಿ ವೇತನಕ್ಕೆ ಪರಿಗಣಿಸಲಾಗುವುದು

ವಿದ್ಯಾರ್ಥಿಯು ಇಲ್ಲಿ ಲಭ್ಯವಿರುವ ಅರ್ಜಿಯ ನಮೂನೆಯನ್ನು ಡೌನ್ ಲೋಡ್ ಮಾಡಿ ಭರ್ತಿ ಮಾಡಬೇಕಾಗುತ್ತದೆ . ಭರ್ತಿ ಮಾಡಿದ ಅರ್ಜಿಯನ್ನು ಕೆಳಗೆ ನಮೂದಿಸಿದ ದಾಖಲಾತಿಗಳೊಂದಿಗೆ ಟ್ರಸ್ಟಿನ ವಿಳಾಸಕ್ಕೆ ಕಳುಹಿಸಬೇಕು ಮತ್ತು ಎಲ್ಲ ದಾಖಲಾತಿಗಳನ್ನು ಅರ್ಜಿಯೊಂದಿಗೆ
ಸ್ಕ್ಯಾನ್ ಮಾಡಿ ಟ್ರಸ್ಟಿನ ಈ - ಮೇಲ್ ವಿಳಾಸಕ್ಕೆ (drssjkt@gmail.com) ಕಳುಹಿಸಬೇಕು.


 Click here!


ಅಗತ್ಯವಾಗಿ ಲಗತ್ತಿಸಬೇಕಾದ ದಾಖಲಾತಿಗಳು


೧. ವಿದ್ಯಾರ್ಥಿಯ, ತಂದೆ ಮಾತು ತಾಯಿಯ ಆಧಾರ್ ಪ್ರತಿ.

೨. ವಿದ್ಯಾರ್ಥಿಯ, ತಂದೆ ಮತ್ತು ತಾಯಿಯ ಇತ್ತೀಚಿನ ಭಾವಚಿತ್ರ ಲಗತ್ತಿಸಬೇಕು.

೩. ತಂದೆ ಮತ್ತು ತಾಯಿ ಕೋವಿಡ್ ನಿಂದ ಮರಣ ಹೊಂದಿದ ಪ್ರಮಾಣ ಪತ್ರ.

೪. ವಿದ್ಯಾರ್ಥಿಯ ಹಿಂದಿನ ವರ್ಷದ ವಿದ್ಯಾಭ್ಯಾಸದ ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್).

೫. ವಿದ್ಯಾರ್ಥಿಯು ಈ ವರ್ಷ ಶಾಲೆ ಅಥವಾ ಕಾಲೇಜಿಗೆ ಫೀಸ್ ಕಟ್ಟಿದ ಬಗ್ಗೆ ದಾಖಲಾತಿ.

೬. ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರದ ಪಾಸ್ ಬುಕ್ ನ ನಕಲು ಪ್ರತಿ.


ಅರ್ಜಿ ಕಳುಹಿಸಬೇಕಾದ ವಿಳಾಸ

ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್
ಗಣೇಶ ಕಾಂಪ್ಲೆಕ್ಸ್
ಪಿ. ಬಿ. ರಸ್ತೆ ದಾವಣಗೆರೆ 577002
ಈ - ಮೇಲ್ ವಿಳಾಸ drssjkt@gmail.com
www.ssjanakalyantrust.org